ಸೌಕೂರು ಅಥವಾ ಸೌಖ್ಯಪುರ ಭಕ್ತಕೋಟಿಯ ಆರಾಧ್ಯ ಶಕ್ತಿಕೇಂದ್ರ. ಈ ಕ್ಷೇತ್ರಕ್ಕೆ ಇತಿಹಾಸ ತಜ್ಞರು ಮತ್ತು ಅಷ್ಟಮಂಗಳ ಪ್ರಶ್ನೆಯಲ್ಲಿ ತೋರಿಬಂದತೆ ಸುಮಾರು 3000 ವರ್ಷಗಳ ಇತಿಹಾಸ ಇರುವ ಪುರಾತನ ದೇವಸ್ಥಾನವಾಗಿರುತ್ತದೆ ಎಂಬ ಬಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಗರ್ಭಗುಡಿಯ ಮೂರು ದಿಕ್ಕಿನಲ್ಲಿರುವ ದ್ವಾರ ಮತ್ತು ತೀರ್ಥ ಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿ ಇರುವ ಶಿಲ್ಪ ಕಲೆಗಳು ಮತ್ತು ಸಿಂಹ ಇದೆಲ್ಲವನ್ನು ಪರಿಶೀಲಿಸಿ ಹೊಯ್ಸಳ, ಚೋಳರ ಕಾಲದ ಶಿಲ್ಪಕಲೆಯನ್ನು ಸ್ಪಷ್ಟೀಕರಿಸುತ್ತದೆ ಎಂದು ತಿಳಿಸಿರುತ್ತಾರೆ ಮತ್ತು ಇತಿಹಾಸ ಪುಸ್ತಕಗಳಲ್ಲಿ ಸತ್ಯನಾಪುರದ ಸಿರಿ ಹಟ್ಟಿದ ಊರು ಸೌಕೂರು ಎಂದು ಪಾಥನಗಳಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು 12 ಕೋಟಿಗೂ ಮಿಕ್ಕಿ ಖರ್ಚಿನಲ್ಲಿ ಶ್ರೀ ದೇಗುಲವು ಸಂಪೂರ್ಣ ಶಿಲಾಮಯವಾಗಿ ಮೂಡಿಬರಲಿದೆ. ದೇವಸ್ಥಾನದ ಗರ್ಭಗುಡಿಯ ಮೇಲ್ಚಾವಣಿ, ಹೊರಪೌಳಿ, ತೀರ್ಥ ಮಂಟಪ, ವಸಂತ ಮಂಟಪ, ವೀರಭದ್ರ ದೇವರ ಗುಡಿ, ಗಣಪತಿ ದೇವಸ್ಥಾನ ಹಾಗು ಈಶ್ವರ ದೇವಸ್ಥಾನ ನಿರ್ಮಾಣವಾಗಲಿದೆ.
ದೇವಸ್ಥಾನದ ಒಳ ಪ್ರಾಕಾರ ಪೌಲಿ ಮತ್ತು ಹೆಬ್ಬಾಗಿಲು