ಸೌಕೂರು ಅಥವಾ ಸೌಖ್ಯಪುರ ಭಕ್ತಕೋಟಿಯ ಆರಾಧ್ಯ ಶಕ್ತಿಕೇಂದ್ರ ಈ ಕ್ಷೇತ್ರಕ್ಕೆ ಇತಿಹಾಸ ತಜ್ಞರು ಮತ್ತು ಅಷ್ಟಮಂಗಳ ಪ್ರಶ್ನೆಯಲ್ಲಿ ತೋರಿಬಂದತೆ ಸುಮಾರು ೩೦೦೦ ವರ್ಷಗಳ ಇತಿಹಾಸ ಇರುವ ಪುರಾತನ ದೇವಸ್ಥಾನವಾಗಿರುತ್ತದೆ ಎಂಬ ಬಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಗರ್ಭಗುಡಿಯ ಮೂರು ದಿಕ್ಕಿನಲ್ಲಿರುವ ದ್ವಾರ ಮತ್ತು ತೀರ್ಥ ಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿ ಇರುವ ಶಿಲ್ಪ ಕಲೆಗಳು ಮತ್ತು ಸಿಂಹ ಇದೆಲ್ಲವನ್ನು ಪರಿಶೀಲಿಸಿ ಹೊಯ್ಸಳ,ಚೋಳರ ಕಾಲದ ಶಿಲ್ಪಕಲೆಯನ್ನು ಸ್ಪಷ್ಟೀಕರಿಸುತ್ತದೆ ಎಂದು ತಿಳಿಸಿರುತ್ತಾರೆ ಮತ್ತು ಇತಿಹಾಸ ಪುಸ್ತಕಗಳಲ್ಲಿ ಸತ್ಯನಾಪುರದ ಸಿರಿ ಹಟ್ಟಿದ ಊರು ಸೌಕೂರು ಎಂದು ಪಾಥನಗಳಲ್ಲಿ ಉಲ್ಲೇಖಿಸಲಾಗಿದೆ ಒಂದೇ ಪಾಣೆ ಪೀಟದಲ್ಲಿ ಮಹಾಲಕ್ಷಿö್ಮÃ,ಮಹಾಕಾಳಿ,ಮಹಾಸರಸ್ವತಿಯರ ಮೂರು ಲಿಂಗಳಲ್ಲಿ ಶಕ್ತಿಯನ್ನೊಳಗೊಂಡು ಎಕ ಶಕ್ತಿಯಾಗಿರುವುದು ಸೌಕೂರು ದುರ್ಗಾಪರಮೇಶ್ವರೀ ಅಮ್ಮನವರ ವೈಶಿಷ್ಟö್ಯವಾಗಿದೆ ಕುಜ್ಜಾ ನದಿಯ ತಟದ ಗೋಡಾರಣ್ಯ ಪದೇಶದಲ್ಲಿ ಸೌಖ್ಯ ಮುನಿಗಳು ಯಜ್ಜಾಯಾಗಾದಿಗಳನ್ನು ಮಾಡುತ್ತಿದ್ದರು ಇವರ ಯಜ್ಜಾಯಾಗಾದಿಗಳಿಗೆ ಕೌಂಜಾವನದ ಅಸುರ ದೈತ್ಯನಾದ ಕೌಂಜಾಸುರನ್ನು ತೊಂದರೆ ಮಾಡುತ್ತಿದ್ದನ್ನು ಇವನ ಉಪಟಳವನ್ನು ತಾಳಾಲಾರದೆ ಆದಿಮಾಹೆಯನ್ನು ಕರಿತು ತಪಸ್ಸನ್ನು ಆರ್ಚರಿಸುತ್ತಾರೆ ಇವರ ಕಠೋರ ತಪ್ಪಸ್ಸಿಗೆ ಮಹಾಲಕ್ಷಿö್ಮÃ,ಮಹಾಕಾಳಿ,ಮಹಾಸರಸ್ವತಿ, ಎಂಬ ತ್ರೆöÊ ಶಕ್ತಿಯವರು ಪ್ರತೇಕ್ಷವಾಗಿ ದುಷ್ಟ ಅಸುರನ ಜೂತೆ ಯುದ್ದಮಾಡುತ್ತಾರೆ ಅಸುರನ್ನು ವರಬಲನ್ವಿತನಾದ ಕಾರಾಣ ತ್ರೆöÊ ಶಕ್ತಿಯರಿಂದ ಕೊಲ್ಲಲು ಸಾಧ್ಯಾವಾಗುವುದಿಲ್ಲ ಆದ್ದರಿಂದ ಮೂರು ಶಕ್ತಿಯವರು ಆತ ಪಡೆದ ವರ ಬಲವನ್ನು ಅರಿತು ಕರಿದಾದ ಹಾಸು ಶಿಲೆಯಲ್ಲಿ ಐಕ್ಯರಾಗುತ್ತಾರೆ ಇದನ್ನು ಅರಿತ ಕೌಂಜಾಸುರನ್ನು ತನ್ನ ಗದೆಯಿಂದ ಶಿಲೆಯನ್ನು ಒಡೆಯಲು ಮುಂದೆ ಬಂದಾಗ ಮೂರು ಶಕ್ತಿಯರು ಒಂದಾಗಿ ಎಕ ಶಕ್ತಿಯಾಗಿ ದುರ್ಗಾಪರಮೇಶ್ವರೀ ರೂಪದಲ್ಲಿ ಶಿಲೆ ಒಡದು ಯೋನಿ ಮುದ್ರೆಯಲ್ಲಿ ಜನಿಸಿ ದುಷ್ಟ ಕೌಂಜಾಸುರನ ಜೊತೆ ದೇವಿ ಹೋರಾಡುವಾಗ ದುಷ್ಟ ಅಸುರನ್ನು ಓಡಿ ಹೋಗುತ್ತಾನೆ ಇದನ್ನು ಅರಿತ ದುರ್ಗೆ ಆಸುರನನ್ನು ಎಳೆದು ತರಲು ತನ್ನ ಮಗನಾದ ವೀರಭದ್ರನಿಗೆ ಅಪ್ಪಣೆ ಮಾಡುತ್ತಾಳೆ ವೀರಭದ್ರನ್ನು ತನ್ನ ಮಾಯ ವಿದ್ದೆಯಿಂದ ಅಸುರನನ್ನು ಎಳೆದು ತರುತ್ತಾನೆ ಆಗ ದುರ್ಗಾಪರಮೇಶ್ವರೀ ಅಸುರನನ್ನು ಕೊಲ್ಲುತ್ತಾಳೆ ಕೌಂಜಾಸುರನ ಮಧಿಸಿದ ಈ ಸ್ಥಳ ಇನ್ನು ಮುಂದೆ ಕೌಂಜಾವನ ಅಥವಾ ಕೌಂಜೂರು ಎಂದು ನಾಮಕರಣ ಮಾಡುತ್ತಾಳೆ ನಂತರ ವಿಜಯದ ಪ್ರತೀಕವಾಗಿ ಸೌಖ್ಯಮುನಿಗಳು ದೇವಿಗೆ ಮಂಗಳಾರತಿ ಬೆಳಗಿ ಅಮ್ಮ ನೀನ್ನು ಈ ಭೋಮಿಯಲ್ಲಿ ನೆಲೆಸಬೇಕು ಎಂದು ಪ್ರಾರ್ಥಿಸುತ್ತಾರೆ ಆತನ ಕೋರಿಕೆಯಂತೆ ಕುಜ್ಜಾ ನದಿಯ ತಟದ ನಾನು ಜನಿಸಿದ ಮೂಲ ಸ್ಥಳದ ಪೂರ್ವ ದಿಕ್ಕಿನ ಎತ್ತರ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ನನ್ನಗೆ ಗುಡಿನಿರ್ಮಿಸಿ ಒಂದೆ ಪಾಣಿ ಪೀಠದ ಮೇಲೆ ಮೂರು ಲಿಂಗಳನ್ನು ಮಹಾಲಕ್ಷಿö್ಮÃ, ಮಹಾಕಾಳಿ,ಮಹಾಸರಸ್ವತಿ ಎಂದು ಕ್ರಮವಾಗಿ ಪ್ರತೀಷ್ಠಾಪಿಸಬೇಕು ನನ್ನ ಹೊರ ಪ್ರಕಾರದಲ್ಲಿ ಬಲಭಾಗದಲ್ಲಿ ಎಕ ಶಿಲೆಯಲ್ಲಿ ಮುಖದ ಭಾಗ ಮಾತ್ರ ಇರುವ ಶಿಲಾ ವಿಗ್ರಹದಲ್ಲಿ ವೀರಭದ್ರ ದೇವರನ್ನು ಪ್ರತೀಷ್ಠಾಪಿಸಬೇಕು ಇನ್ನು ಗಣಪತಿ ದೇವರು,ಈಶ್ವರ ದೇವರು, ಹುಲಿದೇವರು,ನಾಗದೇವರನ್ನು ಮತ್ತು ಕ್ಷೇತ್ರದ ದೈವಗಳಾದ ಬಾಗಿಲು ಬೊಬ್ಬರ್ಯ,ಮಾರಣಕಟ್ಟೆ ಚಿಕ್ಕು,ಹ್ಯಾಗುಳಿ,ಚೌಡಿ ಅಮ್ಮ, ಚಿತ್ತೇರಿಯಲ್ಲಿ ನಾಗ ಬ್ರಹ್ಮ ಪರಿವಾರವನ್ನು ಸೂಕ್ತ ಸ್ಥಳದಲ್ಲಿ ಪ್ರತೀಷ್ಠಾಪಿಸಬೇಕು ಆಗಮ ಪದ್ದತಿಯಂತೆ ತ್ರೀಕಾಲ ಪೂಜೆ ನಡೆಯಬೇಕು ವಿಶೇಷವಾಗಿ ಮಾಘ ಬಹುಳ ಮೂಲ ನಕ್ಷತ್ರಕ್ಕೆ ವಾ಼ರ್ಷಿಕ ಮನ್ಮಹಾರಥೋತ್ಸವ,ಕಾರ್ತಿಕ ಮಾಸದ ಕೃಷ್ಣ ಚತುದರ್ಶಿ ದಿನ ದೀಪೋತ್ಸವ, ಮಕ್ರರ ಸಂಕ್ರಮಣ ಮೊದಲ ದಿನ ಮಾರಿಸಮಾರಾಧನೆ ರಾತ್ರಿ ನಾಗನಿಗೆ ಹಾಲಿಟ್ಟು ಸೇವೆ, ವೀರಭದ್ರ ದೇವರಿಗೆ ಡಕ್ಕೆ ಬಲಿ ಸೇವೆ ನಡೆಯಬೇಕು ನವರಾತ್ರಿಯ ಆಚರಣೆ ಮಾಡಬೇಕು ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ವಸುಪುರದ ರಾಜನಿಗೆ ಕನಸಲ್ಲಿ ತಿಳಿಸಿರುತ್ತೇನೆ ನಿನ್ನು ನನ್ನ ಕುರಿತು ತಪಸ್ಸು ಮಾಡಿದ ಸ್ಥಳ ಸೌಖ್ಯಮುನಿಯ ದೇವಿಯ ಆರಾಧನೆಯಿಂದ ಸೌಖ್ಯ ಕಂಡ ಈ ಭೋಮಿ ಇನ್ನು ಮುಂದೆ ಸೌಖ್ಯಪುರ ಎಂದು ಮುಂದಿನ ದಿನಗಳಲ್ಲಿ ಸೌಕೂರು ಎಂದು ಜನರು ಕರೆಯುತ್ತಾರೆ ಮುಂದೆ ನಾನು ಪ್ರತೇಕ್ಷವಾಗುವುದಿಲ್ಲ ಭಕ್ತರ ಕಷ್ಟಗಳನ್ನು ವೀರಭದ್ರ ದೇವರ ದರ್ಶನದಲ್ಲಿ ತಿಳಿಸಿದ್ದಲ್ಲಿ ಪರಿಹಾರ ಸಿಗುವುದು ಎಂದು ಹೇಳಿ ದೇವಿ ಮಾಯವಾಗುತ್ತಾಳೆ.
ಪೂರ್ವಾಭಿಮುಖವಾಗಿರುವ ಗಭಗುಡಿ ಶಿಲಾಮಯವಾಗಿ ಮರದ ಮಾಡಿಗೆ ತಾಮ್ರದ ಹೊಂದಿಕೆ ಮಾಡಲಾಗಿದೆ ತೀರ್ಥಮಂಟಪದಲ್ಲಿ ಇರುವ ನಾಲ್ಕು ಕಂಬಗಳ ಶಿಲ್ಪ ಕೆತ್ತನೆಗಳು ಅತ್ಯಂತ ಅಕರ್ಷಕವಾಗಿ ನಿರ್ಮಾಣವಾಗಿದೆ ಕ್ಷೇತ್ರದ ಹಿರಿಮೆಯನ್ನು ಸಾರುವ ಕ್ಷೇತ್ರದಲ್ಲಿ ಇರಿವ ೧೦ ನೇ ಶತಮಾನಕ್ಕೆ ಸೇರಿದ್ದೆನ್ನಲಾದ ಶಿಲಾ ಶಾಸನಗಳು ಸಾಕ್ಷಿಯಾಗಿವೆ ಅತೀ ಎತ್ತರದ ಧ್ವಜಸ್ತಂಭ,ರಾಜಗೋಪುರ, ಪುಷ್ಕರಣೆ,ಓಕುಳಿ ಕೆರೆ,ದೇವಳದ ಎದುರು ಇರುವ ಅಶ್ವತ್ಥ ಕಟ್ಟೆ,ಯಾಗ ಶಾಲೆ, ಮೂಲಸ್ಥಳ,ಕುಜ್ಜಾ ನದಿ ಎಲ್ಲವೂ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿಯುತ್ತದೆ ಮಾವಿನಕಟ್ಟೆಯಲ್ಲಿ ಮತ್ತು ಕಂಡ್ಲೂರಿನಲ್ಲಿ ಭವ್ಯವಾದ ಸ್ವಾಗತ ಗೋಪುರ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಲವು ರಾಜಮಹಾರಾಜರ ಆಳ್ವಿಕೆಯನ್ನು ಕಂಡಿದೆ ಕೆನರ ಜಿಲ್ಲೆಯ ಪ್ರಥಮ ಕಲೆಕ್ಟರ್ ಲೋರ್ಡ್ ಮುನ್ರೊ ಕಾವಾವಧಿಯಲ್ಲಿ ಈ ದೇವಸ್ಥಾನಕ್ಕೆ ಸರಕಾರದ ಮನ್ನಣೆ ನೀಡಿ ತಸ್ತೀಕು ಪಟ್ಟಿಗೆ ಸೇರಿಸಿದ್ದರು ಎನ್ನಲಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಪುಷ್ಬಪವಾಡ ಕ್ಷೇತ್ರ ಎಂದೇ ಪ್ರಖ್ಯಾತಿಯಾಗಿದೆ. ಉದ್ಯೋಗ,ವ್ಯಪಾರ,ಗೃಹ ನಿರ್ಮಾಣ, ಇತರೆ ಶುಭ ಸಮಾರಂಭಗಳ ಪೂರ್ವದಲ್ಲಿ ಕ್ಷೇತ್ರದಲ್ಲಿ ಪ್ರಸಾದ ನೋಡಲಾಗುತ್ತದೆ ಮದುವೆ ವಿಚಾರದಲ್ಲಿ ಪ್ರಸಾದ ನೋಡುವುದು ಎನ್ನುವ ಪ್ರಕ್ರಿಯೆ ಇಲ್ಲಿ ಹೆಚ್ಚಾಗಿ ನಡೆಯುತ್ತದೆ. ದೇವಿಗೆ ಪ್ರೀಯವಾದ ಹರಿವಾಣ ನೈವೇಧ್ಯ ಸೇವೆಯನ್ನು ಕೊಟ್ಟು ಪ್ರಾರ್ಥನೆ ಮಾಡಿದರೆ ಭಕ್ರರ ಬೇಡಿಕೆಗೆ ದೇವಿ ಪುಷ್ಬ ಪ್ರಸಾದ ರೂಪದಲ್ಲಿ ತನ್ನ ಅನುಮತಿಯನ್ನು ಸೂಚಿಸುದನ್ನು ಇಲ್ಲಿ ನೋಡಬಹುದು ದೇವರ ಮುಡಿಯಿಂದ ಹೂ ಪ್ರಸಾದವಾದರೆ ಕಾರ್ಯ ಸುಖಪ್ರಧ ಕಾರ್ಯಜಯ ಎಂದರ್ಥ ಹಾಗಾಗಿ ಈ ಕ್ಷೇತ್ರಕ್ಕೆ ಪುಷ್ಬಪವಾಡ ಕ್ಷೇತ್ರ ಎನ್ನುವ ಬಿರುವುದು ಬಂದಿದೆ.
ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಪ್ರೀಯವಾದ ಸೇವೆಗಳಲ್ಲಿ ಯಕ್ಷಗಾನ ಸೇವೆ ಒಂದು ಸುಮಾರು ೨೦೦ ವರ್ಷಗಳ ಇತಿಹಾಸ ಇರುವ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ದಶಾವತಾರ ಯಕ್ಷಗಾನ ಯಕ್ಷಗಾನ ಮಂಡಳಿಯಾಗಿದೆ ಸಾಕಷ್ಟು ಸಂಖ್ಯೆಯ ಜೋಡಾಟ,ಕೋಡಾಟ,ಹರಕೆ ಬಂiÀiಲಾಟಗಳನ್ನು ಪ್ರದರ್ಶನ ಮಾಡಿದ ಕಿರ್ತಿ ಇದೆ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿ ಅಸಂಖ್ಯ ಕಲಾವಿಧರನ್ನು ರೂಪಿಸಿದ ಖ್ಯಾತಿಯೂ ಸೌಕೂರು ಮೇಳಕ್ಕಿದೆ ಮತ್ತು ಬಯಾಟದಲ್ಲಿ ಇಗಲು ಸಹ ಅಗ್ರ ಸ್ಥಾನವನ್ನು ಹೊಂದಿದ ಯಕ್ಷಗಾನ ಮೇಳವಾಗಿದೆ. ದೇವಿಯನ್ನು ನಂಬಿದ ಭಕ್ತರು ಉದ್ಯೋಗ,ಕೋಟು ಕಚೇರಿ ಪ್ರಕಣ,ಜಾಗದ ತಕರಾರು,ಗೃಹ ನಿರ್ಮಾಣ,ವ್ಯಾಪಾರ,ಸಂತಾನ ಸಮಸ್ಯೆ,ವಿವಾಹ ತಡೆ ಸಮಸ್ಯೆಗಳ ನಿವಾರಣೆಗೆ ಯಕ್ಷಗಾನ ಸೇವೆಯನ್ನು ಮಾಡಿಸಿ ಸಮಸ್ಸೆ ನಿವಾರಣೆಯಾದ ಅನೇಕ ಸಾಕ್ಷೀಗಳು ಇಲ್ಲಿವೆ.
ಶ್ರೀ ಕ್ಷೇತ್ರ ಸೌಕೂರು, ಶ್ರೀ ಕ್ಷೇತ್ರ ಕೊಲ್ಲೂರು, ಶ್ರೀ ಕ್ಷೇತ್ರ ಕಮಲಶಿಲೆಗೂ ಅವಿನಭಾವ ಸಂಭAದ ಇದೆ ಇವರಲ್ಲಿ ಹಿರಿಯವಳು ಸೌಕೂರು ದುರ್ಗಾಪರಮೇಶ್ವರೀ ಎರಡನೇವಳು ಕೊಲ್ಲೂರು ಮುಕಾಂಬಿಕೆ ಮೂರನೇವಳು ಕಮಲಶಿಲೆ ದುರ್ಗಾಪರಮೇಶ್ವರೀ ಇದಕ್ಕೆ ಉದಾರಣೆಯಾಗಿ ಮಾಘಬಹುಳ ಮೂಲ ನಕ್ಷತ್ರದಂದು ಸೌಕೂರು ಮನ್ಮಹಾರಥೋತ್ಸವ, ಪಾಲ್ಗುಣ ಬಹುಳ ಮೂಲ ನಕ್ಷತ್ರದಂದು ಕೊಲ್ಲೂರು ಮನ್ಮಹಾರಥೋತ್ಸವ ಚೈತ್ರ ಬಹುಳ ಮೂಲ ನಕ್ಷತ್ರದಂದು ಕಮಲಶಿಲೆ ಮನ್ಮಹಾರಥೋತ್ಸವ ನಡೆಯುತ್ತದೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಅರಣ್ಯ ಮಧ್ಯ ಕರಿದಾದ ಶಿಲೆಯಲ್ಲಿ ಯೋನಿ ಮುದ್ರೆಯಲ್ಲಿ ಜನಿಸಿರುತ್ತಾರೆ ಅಮ್ಮನವರ ಜನನವಾದ ಈ ಸ್ಥಳಕ್ಕೆ ಮೂಲ ಸ್ಥಾನ ಎಂದು ಈಗ ಕರೆಯುತ್ತಾರೆ ದೇವಿ ಜನಿಸಿದ ಯೋನಿ ಮುದ್ರೆ ಶ್ರೀ ಕ್ಷೇತ್ರ ಸೌಕೂರು ಬಿಟ್ಟರೇ ವೈ಼ಷ್ಣೊದೇವಿಯಲ್ಲಿ ಮಾತ್ರ ಕಾಣ ಸಿಗುತ್ತದೆ ಇದು ಪ್ರಕೃತಿಕಾರಾಧಾನಾ ಸಂಕೇತವಾಗಿತ್ತು ಮೂಲ ಸ್ಥಳದ ಹಿಂದೆ ಒಂದು ಕೆರೆ ಇದೆ ಸೌಖ್ಯ ಮುನಿಗಳು ದೇವಿಯ ಆರಾಧನೆಗೆ ಈ ಕರೆಯ ನೀರನ್ನು ತರುತ್ತಿದ್ದರು ಎನ್ನಲಾಗುತ್ತಿದೆ ಅಮ್ಮನ ಕರೆಯಂದೆ ಹೆಸರು ಪಡೆದಿದೆ.
ಪೂರ್ವಶ್ರಯದಲ್ಲಿ ಸಾರಕಲ್ಲು,ಕಾವ್ರಾಡಿ ಮಧ್ಯಭಾಗದಲ್ಲಿ ಜಂಗಮರ ಜಡ್ಡು ಶ್ರೀ ಮಲ್ಲಿಕಾರ್ಜುನ ದೇವರಿಗೂ ಸೌಕೂರು ದುರ್ಗಾಪರಮೇಶ್ವರೀ ಅಮ್ಮನವರಿಗೂ ಅವಿನಾಭವ ಸಂಬAದವಿದೆ. ಶ್ರೀ ಕ್ಷೇತ್ರಕ್ಕೆ ಗುಲ್ವಾಡಿ,ಕೆಂಚನೂರು,ಕAಕುAರ್ಜೆ,ಕಾವ್ರಾಡಿ ಎನ್ನುವ ನಾಲ್ಕು ಮಾಗಣೆ ಗ್ರಾಮವನ್ನು ಹೊಂದಿದೆ ವಾರ್ಷಿಕ ಮನ್ಮಹಾರಥೋತ್ಸವದಲ್ಲಿ ಕಂಡ್ಲೂರು ಮುಸ್ಸೀಂ ಮನೆತನದಿಂದ್ದ ಬ್ರಹ್ಮ ರಥದ ಅಲಂಕಾರಕ್ಕೆ ಬಳಸುವ ಬಿಳಿ ಬಟ್ಟೆಯನ್ನು ದೇವಿಗೆ ಕಪ್ಪ ಕಾಣೆಕೆ ರೂಪದಲ್ಲಿ ಇವತ್ತಿಗೂ ನೀಡುತ್ತಿದ್ದಾರೆ.
ಮಾರಣಕಟ್ಟೆ ಕ್ಷೇತ್ರದ ಚಿಕ್ಕು ದೈವವನ್ನು ಒಂದು ಕಾಲದಲ್ಲಿ ಮಹಾರೋಗ ಪರಿಹಾರಕ್ಕಾಗಿ ಪಾರ್ಥನೆ ಮಾಡಿ ಇಲ್ಲಗೆ ಕರೆತರಲಾಗಿದೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತೋರಿಬಂದಿದೆ ಮಾರಣಕಟ್ಟೆಯಲ್ಲಿ ಮಕ್ರರ ಸಂಕ್ರಮಣ ಮೊದಲ ದಿನ ಮಾರಣಕಟ್ಟೆ ಕ್ಷೇತ್ರದ ಚಿಕ್ಕು ಪಾತ್ರಿ ಸೌಕೂರು ಕ್ಷೇತ್ರಕ್ಕೆ ಆಗಮಿಸಿ ಅಮ್ಮನವರಿಗೆ ರಂಗಪೂಜೆ ಸೇವೆ ನೀಡಿ ರಾತ್ರಿ ಕ್ಷೇತ್ರದಲ್ಲಿ ಉಳಿದು ಬೆಳಿಗ್ಗೆ ಬ್ರಾಹ್ಮಿ ಮೂಹುರ್ತದಲ್ಲಿ ವೀರಭದ್ರ ದೇವರ ಎದುರು ಚಿಕ್ಕು ದೈವ ಪಾತ್ರಿಯ ಮೇಲೆ ಆಕಷಣೆಯಾಗಿ ಕ್ಷೇತ್ರದ ಅರ್ಚಕರಿಂದ ಸಿಂಗಾರ ಸೇವೆ ಪಡೆದು ಮಾರಣಕಟ್ಟೆ ಕ್ಷೇತ್ರಕ್ಕೆ ಹೋಗಿ ಅಲ್ಲಿ ಮಕ್ರರಸಂಕ್ರಣ ಜಾತ್ರೆ ನಡೆಯುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.
ಪ್ರತಿ ಸಂಕ್ರಮಣ ದಿನ ಮಧ್ಯಾಹ್ಮಃ೧೨.೦೦ ಗಂಟೆಗೆ ಅಮ್ಮನವರ ಬಲಭಾಗದಲ್ಲಿ ಇರುವ ಬೇರೆ ಎಲ್ಲೂ ನೋಡಲು ಸಾಧ್ಯವಿಲ್ಲದ ಅತೀ ಪ್ರಭವಾಶಾಲಿಯಾದ ಶ್ರೀ ವೀರಭದ್ರ ದೇವರ ದರ್ಶನ ನಡೆಯಲ್ಲಿದೆ ಭಕ್ತರು ತಮ್ಮ ಕಷ್ಟಕಾರ್ಪಣೆಗಳನ್ನು ದೇವರಲ್ಲಿ ನೇವೆದಿಸಿಕೊಂಡು ಪರಿಹಾರ ಕಂಡುಕೊಳ್ಳಬಹುವುದು. ಭಕ್ತರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಪ್ರೀಯವಾದ ಹರಿವಾಣ ನೈವೇಧ್ಯ,ಹೂವಿನ ಪೂಜೆ,ಸರ್ವಸೇವೆ,ಹಾಲುಪರಮಾನ್ನ,ರಂಗಪೂಜೆ,ಪುಷ್ಬರಥೋತ್ಸವ,ಚAಡಿಕಾಹೋಮ,ಚAಡಿಕಾ ಪಾರಾಯಣ,ತುಲಾಭಾರ ಸೇವೆ,ಅನ್ನದಾನ ಸೇವೆ,ಯಕ್ಷಗಾನ ಸೇವೆ ಇತ್ಯಾದಿಗಳನ್ನು ಮಾಡಿಸುತ್ತಾರೆ. ತ್ರಿ ಶಕ್ತಿ ಸ್ವರೂಪಿಣೆಯಾಗಿ ನೆಲೆನಿಂತಿರುವ ಶ್ರೀ ಕ್ಷೇತ್ರ ಸೌಕೂರಿನಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ.ಸಾಕಷ್ಟು ಅಭಿವೃದ್ಥಿಕಾರ್ಯಗಳು ಕ್ಷೇತ್ರದಲ್ಲಿ ಆಗಿವೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮಧ್ಯಾಹ್ನ ಅನ್ನ ಪ್ರಸಾದ ಸೇವೆಯ ವ್ಯವಸ್ಥೆಯನ್ನು ಭಕ್ತರ ಸಹಕಾರದಿಂದ್ದ ನಡೆಸಲಾಗುತ್ತದೆ.